ಬಣ್ಣಾ ... ನೀಡು ಹೆಣ್ಣೇ, ಬಣ್ಣಾ ... ನೀಡು ಹೆಣ್ಣೇ
ನನ್ನ ಹೃದಯದಾ ಕಣ್ಣಿಗೆ....
ಬಣ್ಣಾ ... ನೀಡು ಹೆಣ್ಣೇ, ಬಣ್ಣಾ ... ನೀಡು ಹೆಣ್ಣೇ
ನನ್ನ ಕಣ್ಣಿನಾ ಕನಸಿಗೆ .....
ಬಣ್ಣಾ ... ನೀಡು ಹೆಣ್ಣೇ, ಬಣ್ಣಾ ... ನೀಡು ಹೆಣ್ಣೇ
ನನ್ನ ಕನಸಿನ; ನಿನ್ನ ನೆನಪಿಗೆ ....
ಹೃದಯವು ಒಳಾಗೊಯ್ತು,
ಕಣ್ಣೆರಡು ಕಾಣದಾಯ್ತು,
ನೀ ಬಾರದೆ ... ಬಳಿ ಬಾರದೇ....
ಕನಸೆಲ್ಲ ಕಮರಿ ಹೋಯ್ತು ,
ನೆನಪೆಲ್ಲ ಮಾಸಿಹೊಯ್ತು ,
ನೀ ಬಾರದೇ.... ನೆನಪಾಗದೆ ...
ಹೃದಯದಾ ಕಣ್ಣಲ್ಲಿ... ಕನಸಿನಾ ನೆನಪಲ್ಲಿ ...
ಕಟ್ಟಿರುವ ಅರಮನೆಯನ್ನ ...
ಬಂದೊಮ್ಮೆ ಹೋಗು ...
ಮಹಾರಾಣಿಯಾಗಿ .... ಮನದರಸಿ ಯಾಗಿ ...
ಬದುಕಿನಾ ಪುಸ್ತ್ತಕದಿ ... ಮುಖಪುಟದ ಹಾಳೆಯು ನಾನು ...
ನೀ ಬರದೆ ಕಾಲಿಯಾಗೆ ಉಳಿದಿರುವೆ ಇನ್ನೂ ...
ನೀ ಬಂದು ಒಮ್ಮೆಯಾದ್ರು ರಂಗನ್ನು ನೀಡು ...
ಬಣ್ಣಾ ... ನೀಡು ಹೆಣ್ಣೇ, ಬಣ್ಣಾ ... ನೀಡು ಹೆಣ್ಣೇ...............
----> ಕಿರಣ್ ಎಂ ಎಸ್